ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಸಭ್ಯ, ಸುಸಂಕೃತ ಪ್ರೇಕ್ಷಕರಿಗೆ ಹಿಂಸೆಯಾಗಿ ಪರಿಣಮಿಸಿದೆ. ಮೊದಲನೆಯದಾಗಿ ಪ್ರೇಕ್ಷಕರ, ಅಭಿಮಾನಿಗಳ ಅತಿರೇಕದ ವರ್ತನೆ. ಇವರ ಸಿಳ್ಳು, ಚಪ್ಪಾಳೆ, ಕೂಗಾಟ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಇವರು ಯಕ್ಷಗಾನ ಪ್ರದರ್ಶನ ನೋಡುವುದಕ್ಕೆ ಬಂದಿದ್ದಾರೆಯೆ ಅಥವ ಕೂಗಾಡುವುದಕ್ಕೆ ಬಂದಿದ್ದಾರೆಯೊ ಎನಿಸುತ್ತದೆ. ಬಹುತೇಕ ಜನರು ಪಾನಮತ್ತರಾಗಿ ಬರುವುದೂ ಕೂಡ ಸಾಮಾನ್ಯ.
ಎರಡನೆಯದಾಗಿ ಅತೀ ಎನಿಸುವ ಸಭಾ ಕಾರ್ಯಕ್ರಮ. ಯಕ್ಷಗಾನ ಯೋಗಕ್ಷೇಮ ಹೊಣೆ ಹೊತ್ತಿರುವ ಹಿರಿಯರೊಬ್ಬರು ಈಗ ತೀರ ಹಾಸ್ಯಾಸ್ಪದರಾಗಿರುವುದು ದೊಡ್ಡ ದುರಂತ. ಘಂಟೆಗತ್ತಲೆ ನಡೆಯುವ ಈ ಸಭಾ ಕಾರ್ಯಕ್ರಮಗಳಿಂದಾಗಿ ಹೆಂಗಸರು ಮಕ್ಕಳು ಯಕ್ಷಗಾನ ನೋಡದೆ ಹಿಂದಿರುಗುವುದು, ಸಭಾ ಕಾರ್ಯಕ್ರಮಗಳಿದ್ದಲ್ಲಿ ಅಂಥಹ ಪ್ರದರ್ಶನಗಳಿಗೆ ಬಾರದಿರುವುದು ಇತ್ತೀಚಿನ ದುರಂತಮಯ ಬೆಳವಣಿಗೆ. ಅತಿಯಾದರೆ ಅಮೃತವೂ ವಿಷವೆಂಬ ನಾಣ್ಣುಡಿಯನ್ನು ಬಲ್ಲ ಎಲ್ಲ ಕಲಾಪ್ರೇಮಿಗಳು, ಸಂಘಟಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಯಕ್ಷಗಾನವನ್ನು ಹಿಂಸೆಯಿಲ್ಲದೆ, ಸಭ್ಯರೀತಿಯಿಂದ ಸವಿಯುವ ಅವಕಾಶವನ್ನು ಮಾಡಿಕೊಡಲಿ ಎಂಬುದು ನನ್ನ ಕಳಕಳಿಯ ಪ್ರಾರ್ಥನೆ.
Subscribe to:
Post Comments (Atom)
1 comment:
I fully endorse your comments... UtakkiMTha uppinakAyi jAsthi AgabAradu alvA?
Post a Comment