ಪ್ರಸ್ತುತ ಕಲಾವಿದರಲ್ಲಿ ಭಸ್ಮಾಸುರನ ಪಾತ್ರವನ್ನು ದಕ್ಕಿಸಿಕೊಂಡ ಏಕಮಾತ್ರ ಕಲಾವಿದರೆಂದರೆ ಚಿಟ್ಟಾಣಿಯವರು. ಅತಿರಥ ಕಲಾವಿದರಾದ ಶಂಭು ಹೆಗಡೆ,ಗೋಡೆ , ಮಹಾಬಲ ಹೆಗಡೆ ಮತ್ತು ಇತ್ತೀಚಿನ ದಿನಗಳಲ್ಲಿ ಕೊಂಡದಕುಳಿ, ಕಣ್ಣಿ ಮುಂತಾದ ಕಲಾವಿದರಿಗೂ ಈ ಪಾತ್ರ ಒಲಿಯಲಿಲ್ಲ. ಇಂಥ ಕಾಲಘಟ್ಟದಲ್ಲಿ ಭಸ್ಮಾಸುರ ಪಾತ್ರದಲ್ಲಿ ಕೇಳಿ ಬರುತ್ತಿರುವ ಹೆಸರು ತೋಟಿಮನೆ ಗಣಪತಿ ಹೆಗಡೆಯವರದು.
ಭಸ್ಮಾಸುರನ ಪ್ರವೇಶದಲ್ಲಿ ಪ್ರೇಕ್ಶಕರಿಗೆ ರೋಮಾಂಚನ ಉಂಟು ಮಾಡಿದ ತೋಟಿ ಹೊಸ ಭರವಸೆ ಹುಟ್ಟಿಸಿದ್ದಾರೆ. ಸದ್ದಿಲ್ಲದೆ ಮದ್ದರೆವೆ, ಆಲಿಸು ದೇವರ ದೇವ ಮುಂತಾದ ಪದ್ಯಗಳಿಗೆ ಉತ್ತಮ ಅಭಿನಯ ಮತ್ತು ಕುಣಿತಗಳಿಂದ ಮನಸೂರೆಗೈದರು. ಭಸ್ಮಾಸುರನ ಆರಂಭದ ದ್ರುಶ್ಯಗಳಿಗೆ ಚಿಟ್ಟಾಣಿಯವರು ಕಿರೀಟ ಬಳಸುತ್ತಾರೆ. ಬಹುಶ ತೋಟಿಯವರು ಇಲ್ಲಿ ಶಂಭು ಹೆಗಡೆಯವರ ಭಸ್ಮಾಸುರ ವೇಷದಿಂದ ಪ್ರಭಾವಿತರಾದಂತೆ ತೋರುತ್ತದೆ. ತೋಟಿಯವರು ಯಾವ ಸನ್ನಿವೇಶಗಳಿಗೂ ಕಿರೀಟ ಧರಿಸಲಿಲ್ಲ. ಯಕ್ಶಗಾನದಲ್ಲಿ ಭಸ್ಮಾಸುರನಿಗೆ ಯಾವ ರೀತಿಯ ಕಿರೀಟ ಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲವಿದ್ದ ಹಾಗಿದೆ. ಭಸ್ಮಾಸುರನ ಪಾತ್ರಕ್ಕೆ ಬಹುಶ ಚಿಟ್ಟಾಣಿಯವರೆ ರೆಫ಼ರೆನ್ಸ್.
ಸಮಯದ ಅಭಾವದಿಂದ ಮೋಹಿನಿ ಭಸ್ಮಾಸುರರ ಶ್ರುಂಗಾರ ಸನ್ನಿವೇಶಗಳು ನಿರೀಕ್ಶೆಯ ಮಟ್ಟವನ್ನು ತಲುಪಲಿಲ್ಲ. ತೋಟಿಯವರಿಗೆ ಈ ಸನ್ನಿವೇಶಗಳಿಗೆ ಭಾಗವತರಾಗಿ ಒದಗಿ ಬಂದವರು, ಭಸ್ಮಾಸುರ ಮೋಹಿನಿ ಪ್ರಸಂಗದ ಭಾಗವತಿಕೆಗೆ ನ ಭೂತೊ ನ ಭವಿಶ್ಯತಿ ಎಂದು ಹೆಸರಾದ ಧಾರೇಶ್ವರರು. ಶ್ರುಂಗಾರ ಸನ್ನಿವೇಶಗಳೆಲ್ಲಾ ಅತ್ಯಂತ ವೇಗವಾಗಿ ಮುಗಿದು ಪ್ರಸಂಗದ ಕೊನೆಯ ಹಂತ ಭಾರ್ಈ ನಿರಾಸೆ ಮೂಡಿಸಿತು.
ಭಸ್ಮಾಸುರನ ಭೋಗಲಾಲಸೆಯ ಉತ್ಕಂಠತೆಯನ್ನು ಸಾರುವ (ಇದು ಭಸ್ಮಾಸುರ ಪ್ರಸಂಗದ ಅತ್ಯಂತ ಪ್ರಸಿದ್ಧ ಪದ್ಯಗಳಲ್ಲೊಂದು) ಜಾಣೆ ಶಿರೋಮನಿ ಬಾರೆ ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ ಧಾರೇಶ್ವರರು ಪ್ರೇಕ್ಶಕರಿಗಿ ಭಾರ್ಈ ನಿರಾಸೆ ಉಂಟು ಮಾಡಿದರು.ಅದೇ ರೀತಿ ಮೋಹಿನಿ ತನ್ನ ಹರಕೆಯೊಂದಿದೆ ಎಂದು ಭಸ್ಮಾಸುರನಿಗೆ ನಿವೇದನೆ ಮಾಡಿಕೊಳ್ಲುವ ಪದ್ಯವೂ ಮಾಯ. ಒಟ್ಟೂ ಪ್ರಸಂಗದ ದ್ರುಷ್ಟಿಯಿಂದ ಪ್ರೇಕ್ಶಕರಿಗೆ ಕಲಾವಿದರು ಒಂದು ಪ್ರದರ್ಶನದ ಹರಕೆ ತೀರಿಸಿದ ಅನುಭವ. ಯಕ್ಶಗಾನದಿಂದ ಪ್ರೇಕ್ಶಕ ದೂರವಾಗುವುದಕ್ಕೆ ಇದೂ ಒಂದು ಕಾರಣ ಎಂದು ವಿಶಾದದಿಂದ ಹೇಳಬೇಕಾಗಿದೆ..
೫ ಘಂಟೆಗೆ ಒದಗುವ ಪ್ರಸಂಗವನ್ನು ಮೂರು ಘಂಟೆಗಳಿಗೆ ಕುಗ್ಗಿಸುವಾಗ , ಕಲಾವಿದರು ಒಟ್ಟಿಗೆ ಕುಳಿತು ಯೋಚಿಸುವ ಅವಶ್ಯಕತೆ ಇದೆ. ಹಾಸ್ಯ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಮಯದ ನಿಗದಿ, ವಿಶ್ಣುವಿನ ಪಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಅವಕಾಶ, ಅನಗತ್ಯ ದೇವೇಂದ್ರನ ಒಡ್ಡೋಲಗ (ಅದು ಸಾಂಪ್ರದಾಯಿಕ ಅಲ್ಲ)ಇತ್ಯಾದಿಗಳಿಂದಾಗಿ ಪ್ರಸಂಗ ಸೊರಗಿತು.
ಮೋಹಿನಿಯ ಪಾತ್ರದಲ್ಲಿ ನೀಲ್ಕೋಡ್ ಮಂಟಪ ಪ್ರಭಾಕರ ಉಪಾಧ್ಯರ ಮೋಹಿನಿ ಪಾತ್ರವನ್ನು ಅನುಕರಿಸಿದರೂ ತಮ್ಮ ನ್ರುತ್ಯದಿಂದ ಗಮನ ಸೆಳೆದರು. ಶಿವನಾಗಿ ಉಪ್ಪುಂದ ನಾಗೆಂದ್ರ ಉತ್ತಮ ಪ್ರದರ್ಶನ ನೇಡಿದರು. ಮಾತುಗಾರಿಕೆಯಲ್ಲಿ ಪಳಗಿದರೆ, ಇವರಿಂದ ಇನ್ನಷ್ಟು ನಿರೀಕ್ಶಿಸಬಹುದು.
ಧಾರೇಶ್ವರರು ಕೆಲವು ಹಳೆಯ ಮಟ್ಟಿನ ಹಾಡುಗಳನ್ನು (ಬಂದಳಾಗ ಮೋಹಿನಿ ಆನಂದದಿಂದ, ಯಾರಯ್ಯ ವಿಚಾರಿಸುವೆ, ಕಂಡನು ಭಸ್ಮಾಸುರ) ಆಕರ್ಶವಾಗಿ ಹಾಡಿದರು. ಆದರೆ ಅವರು ಹಾಡಿದ ಪದ್ಯಗಳಿಗಿಂತಲೂ ಕತ್ತರಿ ಪ್ರಯೋಗಕ್ಕೆ ಒಳಗಾದ ಪದ್ಯಗಳೇ ಜಾಸ್ತಿ ಇದ್ದುದರಿಂದಲೋ ಏನೋ, ಪ್ರಸಂಗ ಕಳೆ ಕಟ್ಟಲಿಲ್ಲ. ತೋಟಿಯವರಿಗೆ ಭಸ್ಮಾಸುರನ ಪಾತ್ರ ಒಲಿಯುವ ಎಲ್ಲ ಲಕ್ಶಣಗಳೂ ಇವೆ ಎಂಬುದು ಸಮಧಾನದ, ಸಂತೋಷದ ಸಂಗತಿ.
Subscribe to:
Post Comments (Atom)
3 comments:
naa nodida(kelida) dhareshwarara atyanta niraashadayaka bhagawatike.
vayassina prabhavavirabahude?????
bhasmasuradalli Shivana patravannu madidavaru vidyadhara jalavalliyalla sanmanyare adu uppunda nagendra rao anta.
Thanks Nagarathna for pointing out the mistake. I have corrected it. I am extremely sorry for the mistake.
Post a Comment