Tuesday, September 15, 2009

ಚಿಟ್ಟಾಣಿ ಅರುವತ್ತು ವರುಶಗಳ ರಂಗಾನುಭವ ಸಂಭ್ರಮ - ಸಂಧಾನ ವಿಫಲವಾಯ್ತೇಕೆ?

ರವೀಂದ್ರ ಕಲಾಕ್ಶೇತ್ರದಲ್ಲಿ ಇರುವೆಯೂ ಕಾಲಿಡಲಾರದಶ್ಟು ಜನಸಾಗರ. ತಡವಾಗಿ ಬಂದವರಿಗೆ ನಿಂತು ನೋಡುವುದಕ್ಕೂ ಅವಕಾಶವಿಲ್ಲ. ಚಿಟ್ಟಾಣಿ ರಂಗಪ್ರವೇಶದ ಅರವತ್ತನೇ ವರುಶದ ಸಂಭ್ರಮ, ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಬಹುಶ: ಯಕ್ಶಗಾನ ಕಾಲಾವಿದರಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಪಡೆದ, ಯಕ್ಶಗಾನಕ್ಕೆ ಅತ್ಯಂತ ಹೆಚ್ಚಿನ ಜನರನ್ನು ಸೆಳೆದ ಕಲಾವಿದ ಚಿಟ್ಟಾಣಿ.

ಇಂಥಹ ಅಪೂರ್ವ ಕಾರ್ಯಕ್ರಮದಂದು ಚಿಟ್ಟಾಣಿಯವರ ಸಂಧಾನದ ಕೃಶ್ಣ ಪಾತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಎಂಬ ಅಳುಕು ಕಲಾಭಿಮಾನಿಗಳಿಗಿತ್ತು. ಇಂಥಹ ಸಂದರ್ಭಗಲಲ್ಲಿ ಕಲಾವಿದ ಅದ್ಭುತ ಪ್ರದರ್ಶನ ನೀಡುವುದೂ ಉಂಟು. ದುರದೃಶ್ಟವಶಾತ್ ಅಂದು ಪ್ರದರ್ಶನ ವಿಫಲವಾಯ್ತು. ಚಿಟ್ಟಾಣಿಯವರೂ ಮಿಂಚಲಿಲ್ಲ. ಶಶಿಕಾಂತ ಶೆಟ್ಟಿಯವರ ದ್ರೌಪದಿಯ ಪಾತ್ರ ಮಾತ್ರ ಯಶಸ್ವಿಯಾಯ್ತು. ಆರಂಭದ ಕೃಶ್ಣನಾಗಿ ಕಾಣಿಸಿಕೊಂಡ ಕಣ್ಣಿ ಕೃಷ್ಣನ ಪ್ರವೇಶದಲ್ಲೇ ನಿರಾಸೆ ಮೂಡಿಸಿದರು. ಯಾಜಿಯವರ ಕೌರವ 'ಕಡಿಮೆಯಲ್ಲ, ಹೆಚ್ಚಲ್ಲ'. ಬಹುಶ: ಅದೇ ಯಾಜಿಯವರ ವಿಶೇಷತೆ!. ಚಂದ್ರಹಾಸ ಹುಡುಗೋಡರ ಭೀಮ 'ಭೀಮಾಸುರ' ನಂತೆ ತೋರಿ ಬಂತು.

ಕೊಳಗಿಯವರ ಭಾಗವತಿಕೆಯ ಬಗ್ಗೆ ಎರಡು ಮಾತು. ಸಂಧಾನ ಪ್ರಸಂಗ ಎಂಥಹ ಭಾಗವತನಿಗೂ ಸವಾಲೆ. ಕೊಳಗಿಯವರ ಧ್ವನಿ ಶ್ರುತಿಗೂಡಲೂ ಇಲ್ಲ, ಪ್ರೇಕ್ಶಕರನ್ನು ತಟ್ಟಲೂ ಇಲ್ಲ. ಇನ್ನು ಚಿಟ್ಟಾಣಿಯವರ ಪಾತ್ರವನ್ನು 'ಉಟ್ಟಾವ್' ಮಾಡಲೂ ಇಲ್ಲ. ಭೀಮ ದ್ರೌಪದಿ ಸನ್ನಿವೇಶ ಎಂದೂ ಮುಗಿಯದ ಕನ್ನಡ ದೂರದರ್ಶನ ಧಾರವಾಹಿಯನ್ನು ನೆನಪಿಸಿತು. ಭಾಗವತನ ಸ್ಥಾನ ತೆರೆಮರೆಗೆ ಸರಿಯುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಭರವಸೆ ಮೂದಿಸಿರುವ ರಾಘವೆಂದ್ರ ಆಚಾರಿಯವರಂಥಹ ಯುವ ಭಾಗವತರಿಗೆ ಅವಕಾಶ ಮಾಡಿ ಕೊಡುವುದರ ಬಗ್ಗೆ ಸಂಘಟಕರು ಯೋಚಿಸಬೇಕಿದೆ.

ಚಿಟ್ಟಾಣಿಯವರಿಗೆ ಅರುವತ್ತರ ರಂಗಸಂಭ್ರಮದ 'ಸವಿ'ಸಮಯದಲ್ಲಿ ಶುಭಾಶಯಗಳು.

6 comments:

ಮೂರ್ತಿ ಹೊಸಬಾಳೆ. said...

ರಾಘವೇಂದ್ರ ಆಚಾರಿಯವರನ್ನ ಕೊಳಗಿಯವರೊಟ್ಟಿಗೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ಪ್ರಶ್ನೆ?
ರಾಘವೇಂದ್ರ ಆಚಾರಯವರ ಹಲವಾರು ಪ್ರದರ್ಶನ ಗಳನ್ನ ನೋಡಿದ ನನಗೆ ಅವರಲ್ಲಿ ಕಾಳಿಂಗ ನಾವಡರ ಅನುಕರಣೆಯೋಂದು ಬಿಟ್ಟು ಬೇರೆ ವಿಶೇಷತೆ ಕಾಣಲಿಲ್ಲ.

Unknown said...
This comment has been removed by the author.
Anonymous said...

ಕೊಳಗಿಯವರನ್ನೂ ಸೇರಿಸಿ ಯಕ್ಶಗಾನದ ಎಲ್ಲಾ ಭಾಗವತರೂ (ಕೆಲವು ಹಿರಿಯರನ್ನು ಹೊರತುಪಡಿಸಿ) ಇಂದಿಗೂ ಮಾಡುತ್ತಿರುವುದು ಕಾಳಿಂಗ ನಾವಡರ ಅನುಕರಣೆಯ ಪ್ರಯತ್ನ. ಇವರದ್ದೆಲ್ಲ 'ಪ್ರಯತ್ನ' ವಾದರೆ ರಾಘವೇಂದ್ರ ಆಚಾರಿಯವರದ್ದು ನಿಜವಾದ 'ಅನುಕರಣೆ'. ಅವರು ಅದನ್ನು ಸಮರ್ಥವಾಗಿಯೇ ಮಾಡುತ್ತಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ 'ಭೀಶ್ಮ ವಿಜಯ' ಪ್ರಸಂಗದಲ್ಲಿ ಅವರ ಹಾಡುಗಾರಿಕೆ ಅದ್ಭುತವಾಗಿತ್ತು. ಎರಡು ದಶಕಗಳ ಕಾಲ ಚಿಟ್ಟಾಣಿಯವರಿಗೆ ಭಾಗವತಿಕೆ ಮಾಡಿದ ಕೊಳಗಿಯವರ ಭಾಗವತಿಕೆಗಿಂತ ಇವರ ಭಾಗವತಿಕೆ ಉತ್ತಮವಾಗಿದೆ ಎಂದು ಹೇಳಬಲ್ಲೆ.

ರಾಘವೇಂದ್ರ ಆಚಾರಿಯವರಿಗೆ ಇನ್ನೂ 'ತಮ್ಮತನ' ವನ್ನು ಕಂಡುಕೊಳ್ಳಲು ಅವಕಾಶವಿದೆ. ನಿಜಕ್ಕಾದರೆ ಅದರ ಅಗತ್ಯವಿಲ್ಲ. ಅವರು ನಾವಡರ ಅನುಕರಣೆಯನ್ನು ಈಗ ಮಾಡುತ್ತಿರುವಂತೆಯೇ ಮುಂದುವರಿಸಿದರ್ ಯಕ್ಶಲೋಕಕ್ಕೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು?

ಯಕ್ಶ ಅವರು ಹೇಳಿದ್ದರಲ್ಲಿ ತಪ್ಪೇನು ಇಲ್ಲ.

RK Rajarama said...

ಶ್ರೀಯುತ ಶೆಟ್ಟಿಯವರ ಟೀಕೆ "ಕೊಳಗಿಯವರನ್ನೂ ಸೇರಿಸಿ ಯಕ್ಶಗಾನದ ಎಲ್ಲಾ ಭಾಗವತರೂ (ಕೆಲವು ಹಿರಿಯರನ್ನು ಹೊರತುಪಡಿಸಿ) ಇಂದಿಗೂ ಮಾಡುತ್ತಿರುವುದು ಕಾಳಿಂಗ ನಾವಡರ ಅನುಕರಣೆಯ ಪ್ರಯತ್ನ" ಎನ್ನುವುದು ತೀರ ಹಾಸ್ಯಾಸ್ಪದವಾಗಿದೆ! ವಾಸ್ತವಿಕವಾಗಿ ಶ್ರೀಯುತರು ಕಾಳಿಂಗ ನಾವಡರ ಪದ್ಯವನ್ನೂ ಕೇಳಿಲ್ಲ ಕೊಳಗಿಯವರ ಪದ್ಯವನ್ನೂ ಕೇಳಿಲ್ಲ ಎಂಬುದು ಸುಸ್ಪಷ್ಟ ! ಕೊಳಗಿಯವರು ಇವರ ಲೆಕ್ಕದಲ್ಲಿ ಹಿರಿಯ ಭಾಗವತರೋ ಕಿರಿಯ ಭಾಗವತರೋ? ಈ ರಾಘವೇಂದ್ರ ಆಚಾರಿ ಯಾರು? ಅವರು ಈಗಿನ್ನೂ ಎಳೆಯ ವಯಸ್ಸಿನ ಬೆಳೆಯುತ್ತಿರುವ ಭಾಗವತರಾದರೆ ಕೊಳಗಿಯವರಿಗಿಂತಲೂ ಒಳ್ಳೆಯ ಪದ್ಯ ಹೇಳಬಾರದೆಂದೇನೂ ಇಲ್ಲವಲ್ಲ! ಅದು ಯಕ್ಷಗಾನಕ್ಕೆ ಬಹಳ ಆರೋಗ್ಯಕರ ಬೆಳವಣಿಗೆ. ಆದರೆ ಅವರು ತಮ್ಮ ಸ್ವಂತಿಕೆಯಿಂದ ಸ್ಥಾನ ಗಳಿಸಿಕೊಳ್ಳಬೇಕೆ ಹೊರತು ಅವರಿವರ ವಶೀಲಿಯ ಮೇಲಲ್ಲ. ಇನ್ನು ಮೊನ್ನಿನ ಪ್ರಸಂಗದಲ್ಲಿ ಕೊಳಗಿಯವರ ಭಾಗವತಿಕೆ ಪರಿಣಾಮಕಾರಿಯಾಗದಿದ್ದಲ್ಲಿ ಅಪವಾದವೇನೂ ಅಲ್ಲ. ಎಲ್ಲಾ ದಿವಸವೂ ಕಲಾವಿದನ ಕಲಾ ಪ್ರದರ್ಶನ ಒಂದೇ ರೀತಿಯದ್ದಾಗಿರಬೇಕೆಂದು ಬಯಸುವುದು ಪ್ರೇಕ್ಷಕನ ಅತಿಯಾಸೆ! ಏರು ಇಳಿ ಎಂಬುದು ಮನುಷ್ಯ ಸಹಜ ಗುಣ. ಇದು ನಾವೆಲ್ಲರೂ ತಿಳಿದ ನಿತ್ಯ ಸತ್ಯವಲ್ಲವೇ?

ಮೂರ್ತಿ ಹೊಸಬಾಳೆ. said...

@ ಶೆಟ್ಟಿ ಯವರೇ,
ಕೊಳಗಿಯವರು ಕಾಳಿಂಗ ನಾವಡರ ಅನುಕರನೆ ಮಾಡುತ್ತಾರೆ ಎನ್ನುವಲ್ಲಿಗೆ ನಿಮ್ಮ ಯಕ್ಷಗಾನದ ಮೇಲಿನ ಹಿಡಿತ ಅರ್ಥವಾಗುತ್ತದೆ.
ಸುಮಾರು 20 ವರ್ಷಗಳಿಂದ ಯಕ್ಷಗಾನ ಭಾಗವತಿಕೆ ಮಾಡುತ್ತಾ ಬಂದಿರುವ ಕೊಳಗಿಯವರನ್ನ ಕಿರಿಯ ಭಾಗವತರುಗಳ ಸಾಲಿಗೆ ಸೇರಿಸುತ್ತೀರಿ ಎಂದಾದರೆ ನಿಮ್ಮ ತಿಳುವಳಿಕೆಯ ಬಗ್ಗೆ ಬೇಸರ ವೆನಿಸುತ್ತದೆ.

ಅಮೃತ said...

ಸಂಧಾನ ಪ್ರಸಂಗ ಯಾವ ಭಾಗವತನಿಗೂ ಸವಾಲಲ್ಲ. ಆ ಪ್ರಸಂಗದ ಸಾಹಿತ್ಯವು ಸುಲಲಿತ, ಮಟ್ಟು ಕೂಡಾ ಸುಲಭದ್ದೇ. ಭಾಗವತರಿಗೆ ಪ್ರಸಂಗ ಪಾಠವಾಗುವುದು ಸಂಧಾನ ಪ್ರಸಂಗದಿಂದಲೇ. ಈ ಪ್ರಸಂಗದ ಸಾಹಿತ್ಯ ಹಾಡಲು ಅತ್ಯಂತ ಸುಲಭ. ರಾಮಾಯಣದ ಕೆಲವು ಪ್ರಸಂಗಗಳು ಮಾತ್ರ ಭಾಗವತರಿಗೆ ಕಬ್ಬಿಣದ ಕಡಲೆ. ಅಭ್ಯಾಸವಿಲ್ಲದೇ ಹಾಡಲು ಹೊರಟರೆ ಅಭಾಸವಾಗುತ್ತದೆ.